Saturday, June 8, 2013

Sirsi trip

ಯಂಗವು( ಆನು, ರಘು ,ಶಶಾಂಕ್ ,ಆದಿ ,ತಾಜ್) ರಾಶಿ ದಿನ್ದಿಂದ ಶಿರಸಿ( ಎನ್ನ ಊರು)  ಪ್ರವಾಸ ಮಾಡವು ಹೇಳಿ ಯೋಚ್ನೆ ಮಾಡ್ತಾ ಇದ್ದಿದ್ಯ . ಆದ್ರೆ ಅದು ಯೆಂಥಾರು ಒಂದ್ ಕಾರಣಕ್ಕೆ ಮುಂದ್ ಹೋಗ್ತಾ ಇತ್ತು . ಕಡಿಗುವಾ ಈಗ ಹೋಗ್ದೆ ಇದ್ರೆ ಆಗ್ತಿಲ್ಲೆ ಹೇಳಿ ಹೈದರಾಬಾದ್ ಇಂದ ಟ್ರೈನಿಗೆ ಟಿಕೆಟ್ ಬುಕ್ ಮಾದ್ಕ್ಯಂಡ್ಯ(IRCTC  ತತ್ಕಾಲ್  ದಲ್ಲಿ ಟಿಕೆಟ್ ಬುಕ್ ಮಾಡದು ಅಂದ್ರೆ ನರಕ ಯಾತನೆ ). ಪುಣ್ಯಕಾ ಎಲ್ಲರಿಗು ಟಿಕೆಟ್ ಸಿಕ್ಚು .ಹೋಪ ದಿನ ಆಫೀಸ್ಅಲ್ಲಿ ಕೆಲಸ ಮಾಡಲೇ ಮನ್ಸಿತ್ತಿಲ್ಲೇ, ಒಂಥರಾ exitement ..
ಎಲ್ಲ  ರಾತ್ರೆ ಊಟ  ಮಾಡಿ  9 ಗಂಟಿಗೆ ಹೈದರಾಬಾದ್ ಇಂದ ಹುಬ್ಬಳ್ಳಿಗೆ ಹೋಪ ಟ್ರೈನ್ ಹುಬ್ಬಳ್ಳಿ ತಕ ಹೋದ್ಯ   . ಅಲ್ಲಿ ಆದಿ ನಂಗ್ಳ ಕಿಂತ ಮುಂಚೆನೇ ಬಂದು ಕಾಯಿತ ಇದ್ದಿದ್ದ ( ಅಂವ ಬಂದಿದ್ದು ಬೆಂಗಳೂರಿಂದ ). ಎಲ್ಲಾ ಸೇರಿ ಅಲ್ಲಿಂದ ಸಿರ್ಸಿ ಗೆ ಹೊಪತಕ ೧ ಗಂಟೆ ಅತು . ದಾರಿಯಲ್ಲಿ  ಅಕ್ಕಪಕ್ಕ ಫುಲ್ ಹಸಿರಾಗಿತ್ತು .. ಅಲ್ಲಿಂದ ಯಂಗ್ಳುರಿಗೆ (ಹಾಲ್ಕಣಿ ) ೨ ಗಂಟಿಗೆ ಹೋಗ್ ಮುಟದ್ಯ . ಊಟ ಮಾಡ್ಕಂಡ್ ಊರ್ explore ಮಾಡಲೇ ಹೊಂಟ್ಯ . ಮಳೆಗಾಲ ಆಗಿದ್ದಕ್ಕೆ ಮಲೆನಾಡು ಹಸ್ರು carpet ಹಾಕ್ದಂಗೆ ಇತ್ತು . ಎಲ್ಲ ಬದಿಗೆ  ಹಸ್ರಿದ್ರೆ ಅಘನಾಶಿನಿ ಮಾತ್ರ ಕೆಂಪ್ಗೆ ಗಮ್ಭಿರ್ವಾಗಿ ಹರಿತಾ ಇತ್ತು, ಆದರು ಜೂನ್ಇಂದ ಸೆಪ್ಟೆಂಬರ್ ವರಿಗೆ ಬಿಟ್ಟು ಬಿಡದೆ ಹೊಯ್ಯ ಮಳೆ ಈ ವರ್ಷ ಜುಲೈ ಅದ್ರು  ಎಂತಕ್ಕೋ ಸಿಟ್ಟು ಮಾಡ್ಕ್ಯಂಡಂಗೆ ಇತ್ತು .

                                                                  ಅಘನಾಶಿನಿ ನದಿ

        ಮಂಗನ್ ತಲೆ ಬುರುಡೆ 

   ಕರಿ ಕಪ್ಪೆ 

ಕುಂಬ್ರಿ  ಕಾನು 

ಅಳ್ಲಿಕಟ್ಟೆ  ಬೆಟ್ಟ 

                                                                       ಸಣ್ಣ ಹಳ್ಳ

ರಘು ಮತ್ತೆ ತಾಜ್ ಹಳ್ಳಿಬೈಲ್ ಹೊಳೆಯಲ್ಲಿ 

                                                       ಆದಿ , ತಾಜ್ ಹಾಲ್ಕಣಿ ಹಳ್ಳದಲ್ಲಿ

ಕುಂಬ್ರಿ ಬೆಟ್ಟ ಅಳ್ಳಿಕಟ್ಟೆ ಬೆಟ್ಟ ಏಲ್ಲ  ಓಡಾಡಿ ಲಿಂಗದಾನೆ ಬೆಟ್ಟಕ್ಕೆ ಹೋಗತಕ  ತಕ  ಎಲ್ಲಿನ್ದನೋ ಗುಂಡಿನ ಶಬ್ದ ಕೇಳ್ಚು   ಅದು  ಬೇಟೆ ಅಡ್ಥ ಇಪ್ಪ ಶಬ್ದ್ವಗರವು . ಬೇಜಾರ ಅಂದ್ರೆ ಇನ್ನು ಮಲೆನಾಡಲ್ಲಿ  ಬೇಟೆ ನಿತ್ತಿದ್ದಿಲ್ಲೇ , ಈ  ಜನಕ್ಕೆ ಇನ್ನು ಬುದ್ದಿ ಬಂದಂಗೆ ಇಲ್ಲೇ  . ಅದು ಯಾವಾಗ್ ಬತ್ತೊ ಯಂಗಂತೂ ಗೊತ್ತಿಲ್ಲೆ ..

ಬೆಟ್ಟ-ಗುಡ್ಡ , ಕಾನು, ಹೊಳೆ ಎಲ್ಲ ಸುತ್ತಾಡ್ಕ್ಯಂಡ್ ಮನಿಗೆ ಬಪ್ಪತಕ ರಾತ್ರೆ ಅತು . ಮರುದಿನ ಕೆಪ್ಜೋಗ (ಉಂಚಳ್ಳಿ ಫಾಲ್ಸ್)ಕ್ಕೆ  ಹೋಪ plan ಇತ್ತು . ಬೆಳಿಗ್ಗೆ ಎಲ್ಲ ಬೇಗ ಎದ್ದು ತಯಾರ್ ಆಗಿ ಉಂಚಳ್ಳಿ ಫಾಲ್ಸ್ ನೋಡವು ಹೇಳಿ  ಹೋಗಿ ನೋಡ್ರೆ  ಅಲ್ಲಿ ಎಂತು ಕಾನ್ಥಿತ್ತೆ ಇಲ್ಲೇ , ಇಬ್ಬನಿ ತುಂಬ್ಕ್ಯಬುಟ್ಟಿತ್ತು .  ಅಲ್ಲೇ ಎಂತಾರು ಕಾಣ್ ತನ  ಹೇಳಿ ಸಲ್ಪ ಹೊತ್ತು ನೋಡದ್ಯ , ಆದ್ರೆ ಉಪಯೋಗ  ಅಜಿಲ್ಲೇ.  ಮಳೆಗಾಳದಲ್ಲೆಂತು ಅಲ್ಲಿಗೆ ಹೋಪಲಾಗ . ಸೆಪ್ಟೆಂಬರ್ ಅದಮೇಲೆ ಹೋದ್ರೆ ಚೊಲೊನೊಡ್ಕ್ಯಂಡ್ ಬರ್ಲಕ್ಕು ..


ಸಲ್ಪ ಹೊತ್ತಾದ್ಮೇಲೆ  ಎಂತೋ ಕಂಡಂಗ್ ಅತು 

 
                                                       ಕೆಪ್ಪಜೋಗ ಕ್ಕೆ  ಹೋಪ ದಾರಿ

ಅಲ್ಲಿಂದ  ನಂಗ ಯಾಣಕ್ಕೆ  ಹೊದ್ಯ .. ಉಂಚಳ್ಳಿ  ಫಾಲ್ಸ್ ಇಂದ ಅದು 45 ನಿಮಿಷದ್ ದಾರಿ .ಕಾಡು ದಟ್ಟವಾಗಿದ್ದು .  ಇದೇ ಜಾಗ್ ದಲ್ಲಿ ಮೋಹಿನಿ ಭಸ್ಮಾಸುರನ್ ಕೊಂದಿದ್ದು ಹೇಳ ಸ್ಥಳ ಪುರಾಣ ಇದ್ದು  . ಇಲ್ಲಿ ಒಟ್ಟು 62 ಕಲ್ಲಿನ ಶಿಖರ ಇದ್ದ , ಅದ್ರಲ್ಲಿ ಭೈರವ ಶಿಖರ ಮತ್ತೆ ಮೋಹಿನಿ ಶಿಖರ ದೊಡ್ಡವು . ಭೈರವ ಶಿಖರದಲ್ಲಿ ಒಂದು ದೇವಸ್ಥಾನನೂ ಇದ್ದು. ಅಲ್ಲಿ ನಾನು , ರಘು ಸ್ಫಟಿಕದ items ತಗಂಡ್ಯ .  ಭೈರವ ಶಿಖರದ ಗುಹೆ ಒಳಗೆಲ್ಲ ಸುತ್ತಾಡಿ ಬಂದ್ಯ , ಒಳಗೆ ಒಂದಷ್ಟು ಉಂಬಳನು ಇದ್ದಿದ್ದ .
ಯಂಗವು ಯಾಣದಿಂದ ವಾಪಾಸ್ ಬಪ್ಪಕರೆ ರಸ್ತೆ ಮದ್ಯ ಒಂದು ಮರ ಮುರ್ಕ ಬಿದ್ದು ದಾರಿ block  ಆಗೋಗಿತ್ತು, ನನ್ಗವು ಎಲ್ಲ ಸೇರಿ ಮರ ಎತ್ತಿ ಬದಿಗೆ ಹಾಕಿ ಮುಂದೆ ಹೋದ್ಯ .

ಮೋಹಿನಿ ಶಿಖರ 

                                                          ಭೈರವ ಶಿಖರದಲ್ಲಿಪ್ಪ  ಗುಹೆ
                                         


ಯಾಣಕ್ಕೆ 8 ಕಿಲೋಮೀಟರ್ ದೂರದಲ್ಲಿ ಒಂದು ಸಣ್ಣ ಜಲಪಾತ ಇದ್ದು , ಅದ್ರ ಹೆಸರು ವಿಭೂತಿ ಫಾಲ್ಸ್ .ಚಂಡಿಕಾ ಹೊಳೆ( ಅಘನಾಶಿನಿ ಉಪನದಿ) ಮಾಡ  ಜಲಪಾತ .  ಸುಮಾರು 1  km ಹತ್ರದ್ ತಕನು ಗಾಡಿ ಹೋಗ್ತು , ಮಳೆಗಾಲದಲ್ಲಿ ಉಂಬಳದ್  ಕಾಟ ರಾಶಿಯ . ದಾರಿಯಲ್ಲಿ ಬೇರೆ ಮುಳ್ಳಿನ ಮರ ಮುರ್ಕ ಬಿದ್ದಿತ್ತು , ಅದ್ರ ದಾಟ್ಕ್ಯಂದು ನಂಗವು ಹೋದ್ಯ , ಆದ್ರೆ ಆದಿ ಮಾತ್ರ ದಾರಿಯಲ್ಲಿ ಸಿಗ ಸಣ್ಣ ಅಬ್ಬಿ ಲೇ ಮೊಬೈಲ್ ನಲ್ಲಿ ಫೋಟೋ ತೆಗಿಥ ಇದ್ದಿದ್ದ , ಎಷ್ಟ್ ಕರ್ದ್ರು ಬಂಜ್ಞಿಲ್ಲೆ . ಕಡಿಗೆ ಬನ್ಕ ದಾರಿ ತಪ್ಶ್ಗ್ಯಂಡ ಕಾಣ್ತು. ಯಂಗವು ವಾಪಾಸ್ ಬಪ್ಪಕರೆ ಹ್ಯಾಪ್ಮೋರೆ ಹಾಕ್ಯ ಕುತ್ತಿದ್ದ ಪಾಪ ..


ಇಲ್ಲೇ ಆದಿ ಫೋಟೋ ತೆಕ್ಕೊತ ದಾರಿ ತಪ್ಶ್ಗ್ಯಂಡಿದ್ದು 

ವಿಭೂತಿ ಫಾಲ್ಸ್
ಇಲ್ಲಿಂದ ಗೋಕರ್ಣ ಹೆಚ್ಚು ಅಂದ್ರೆ 1 ತಾಸು . ಅಲ್ಲಿ ಮಹಾಭಲೇಶ್ವರ ದೇವಸ್ಥಾನ ಇದ್ದು, ಅಲ್ಲಿ ಆತ್ಮಲಿಂಗ ಇದ್ದು. ದೇವಸ್ಥಾನದ ಬಾಗ್ಲು ತೆಗಿಯದು ೫ ಗಂಟಿಗೆ ಆಗಿತ್ತು . ಅಲ್ಲಿತಕ ನಂಗ beach ನಲ್ಲಿ time pass ಮಾಡ್ದ್ಯ . 4. 40 ಹೊತ್ತಿಗೆ ನಂಗ ದೇವಸ್ಥಾನಕ್ಕೆ ಹೋಗಿ queue ನಲ್ಲಿ ನಿತ್ಗಂಡ್ಯ . ದರ್ಶನ ಮುಗ್ಸ ಹೊತ್ತಿಗೆ 5 . 30 ಅತು , ಅಲ್ಲಿ ಒಂದು ಹಳೇ ಗಣಪತಿ ದೇವಸ್ಥಾನ  ಇದ್ದು , ಇಲ್ಲಿನ ಮೂರ್ತಿ ಪ್ರಪಂಚದಲ್ಲೇ ಅತಿ ಹಳೇ ಗಣಪತಿ ಮೂರ್ತಿ . ಅಲ್ಲೂ ಒಂದು visit ಕೊಟ್ಟು ಮೀರ್ಜಾನ್ ಕೋಟೆ ಬದಿಗೆ  ಹೊಂಟ್ಯ . 




 ಹೊಪತಕ 6 ಗಂಟೆ ಆಗೋಗಿತ್ತು , ಕೋಟೆ ಬಾಗ್ಲು ಹಾಕ್ಬುಟಿದ್ದ .  ನಂಗ ಒಳಗೆ ಹೊಪ್ಲಾಗ್ತ ಹೇಳಿ ಹುಡುಕ ತಕಾ , ಅಲ್ಲೊಂದು ಬದಿಗೆ ರಿಪೇರಿ ನಡೀತಾ ಇಪ್ಪ ಜಗ ಇತ್ತು , ಅಲ್ಲೇ ಜಂಪ್ ಮಾಡ್ಕ್ಯ ಒಳಗೆ ಹೋದ್ಯ . ಒಳಗೆ ಸಕ್ಕತ್ ಆಗಿತ್ತು , ಹಸ್ರು carpet  ಹಾಕ್ದಂಗೆ ಇತ್ತು .  ಅದು ಪೋರ್ಚುಗೀಸ್ರು ಕಟ್ಟಿಸಿದ್ ಕೋಟೆನಡಾ .  ಇನ್ನು ಸುಮಾರಿಗೆ ಸುಸ್ಥಿತಿಯಲ್ಲಿ ಇತ್ತು ಒಳಗಿಪ್ಪ ಬಾವಿ ರಾಶಿ ಚೊಲೊ ಇದ್ದು. 

                                                                      ನಂಗಳ gang
                                          ಅಪ್ಪ ಎಲ್ಲಾರ್ಕಿಂತ ಮದ್ಲೆ ಮೇಲೆ ಹತ್ಗ್ಯ  ಎಲ್ಲರನು ಕರಿತ ಇದ್ದ



ಅಷ್ಟೊತ್ತಿಗೆ ಸಂಜೆ ಆಗಿತ್ತು ,ಗಾಡಿನಲ್ಲಿ ಯಕ್ಷಗಾನ ನೋಡ್ತಾ  ವಾಪಸ್ ನಮ್ಮನಿಗೆ ಹೋಗಿ ಮನ್ಕ್ಯನ್ದ್ಯ .  2ನೇ ದಿನಾ ನಂಗ ಹೋಗಿದ್ದು ಜೋಗಕ್ಕೆ . ಅದು ನಮ್ಮನಿಂದ ಒಂದೂವರೆ ತಾಸ್ ಆಗ್ತು . ಜುಲೈ ಅದರೂ ಚೊಲೊ ಮಳೆ  ಆಗದೆ  ಇದ್ದಿದ್ದಕ್ಕೆ  ಜಾಸ್ತಿ ನೀರ್ ಇತ್ತಿಲ್ಲೇ . ಮದ್ಲು ಉತ್ತರ ಕನ್ನಡದ ಭಾಗಕ್ಕೆ  (British bungalow , ರಾಜ ಫಾಲ್ಸ್ ) ಹೋಗಿ ಸಲ್ಪ ಹೊತ್ತು ಓಡಾಡಿ, ಕಡಿಗೆ ಶಿವಮೊಗ್ಗ part ಇಂದ ಕೆಳಗೆ ಇಳ್ದ್ಯ . ಹೊಪಕರೆ ಎಲ್ಲಾರಿಗು ಮಜಾ, ಬಪ್ಪಕರೆ ಎಲ್ಲಾರ್ ಮುಖನು ಕೆಂಪ್ ಸೇಬಿನ್ ಹಣ್ಣಿನ್ ನಮ್ನಿ ಆಗಿತ್ತು . 





 ಅಷ್ಟೊತ್ತಿಗೆ ಎಲ್ಲಾರಿಗೂ ಹಸಿವ್ ಆಗಿತ್ತು , ಕಾರ್ಗಲ್ಲಿಗೆ ಹೋಗಿ ಊಟ ಮಾಡಿ ದಬ್ಬೆ ಫಾಲ್ಸ್ ಹುಡ್ಕ್ಯ ಹೊಂಟ್ಯ , ಯಾರಿಗೂ ದಾರಿ ಸರಿಯಾಗಿ ಗೊತ್ತಿತ್ತಿಲ್ಲೇ . ಜೋಗದಿಂದ ಭಟ್ಕಳ ರೋಡ್ ತಗಳಕಾಗಿತ್ತು .  ಒಂದ್ಸಲ ದಾರಿ ತಪ್ಸ್ಗ್ಯಂಡು , ಕಡಿಗೆ ಯಾರನ್ನೋ ಕೇಳಿ ಸರಿ ದಾರಿಗೆ ಬಂದ್ಯ . ಭಟ್ಕಳ ರೋಡ್ ಅಲ್ಲಿ ಹೊಸಗದ್ದೆ ಕ್ರಾಸ್ ಅಲ್ಲಿ ಬಲಬದಿಗೆ ಹೋಗವು ಒಂದ್ 5 ಮಾರ್ ಹೋದ್ಮೇಲೆ ರಸ್ತೆ ಮತ್ತೆ ಕವಲಾಗ್ತು  ಅಲ್ಲಿ ಎಡಬದಿಗೆ ಹೋಗವು , ಅಲ್ಲೇ 2 kms ಹೋಗಿ ಅಲ್ಲಿಂಗ ಕಾಲ್ ದಾರಿಯಲ್ಲಿ ನಡ್ಕಂಡ್ ಹೋಗವು . ಅಲ್ಲೇ ಒಂದು ಹವ್ಯಕ ಫ್ಯಾಮಿಲಿ ಇದ್ದು , ಅವ್ರ ಹತ್ರ ದಬ್ಬಿಗೆ ಎಷ್ಟ್ ದೂರ ಆಗ್ತು ಹೇಳಿ ಕೇಳಿರೆ ಅವು ಒಂದೂವರೆ km ಆಗ್ತು ಅಂದ , ಅಲ್ಲಿಂದ ಹೊರಟ್ಕೂಳೆ ಒಂದು ಸಣ್ಣ bridge  ಸಿಕ್ತು ಅಲ್ಲಿಂದ right ತಗಳವು , ಸರಿಯಾದ ದಾರಿ ಇತ್ತಿಲ್ಲೇ ಕಾಲ್ ಹಾದಿ .  ರಾಶ್ ರಾಶಿ ಉಂಬಳ ಇದ್ದಿದ್ದ . ಅದ್ನ ನೋಡ್ಕ್ಯ ತಾಜ್ ಹೆದರಿ ದಬ್ಬಿಗೆ ಬಂಜೇ ಇಲ್ಲೇ . ನಂಗ ಆ ದಾರಿನಲ್ಲಿ ಅಗಳ ಎಲ್ಲ ಹಾರ್ಕ್ಯ , ಒಂದು ಹೊಳೆ ಸಿಕ್ತು ಅದನ್ನ 2 ಸಲ ದಾಟಿ ಹೋದ್ಯ  . ಅಲ್ಲಿ ಒಂದು ಮನೆ ಸಿಕ್ಚು . ಅವ್ರತ್ರೆ ಕೆಳತಕ ಅವೂ 1.5 km ಆಗ್ತು ಅಂದ . ಆಗಲೇ 2 kms ಮೇಲೆ ನಡದಿದ್ವನ . ನಂಗಕ್ಕಿಗೆ ಅಲ್ಲಿ ಫಾಲ್ಸ್ ಇಪ್ಪ ಬಗ್ಗೆನೇ ಅನುಮಾನ ಬಪ್ಪಲೆ ಹಣಕ್ಚು . ಅದ್ರು ನೋಡೇಬುಡನ ಹೇಳಿ ಮುಂದೆ ಹೋದ್ಯ , ಅಲ್ಲಿ ಒಂದು ಕ್ರಿಶ್ಚಿಯನ್  ಕೊಂಕಣಿ ಫ್ಯಾಮಿಲಿ ಇತ್ತು,  ಅವುವ ಒಂದೂವರೆ ಕಿಲೋಮೀಟರು ಆಗ್ತು ಅಂದ .  ಅಲ್ಲಿಂದ ಸಲ್ಪ ಮುಂದೆ ಹೊಪತಕ ದಬ್ಬೆಮನೆ ಬಂತು ಮನೆ ಎದ್ರಿಗೆ ಗದ್ದೆಬಯಲು ಇತ್ತು ಅದ್ರ ತುದಿಗೆ ಒಂದು ಪೇರಳೆ  ಇದ್ದು ಅದ್ರ ಹತ್ರ ಫಾಲ್ಸ್ ಗೆ ಇಳಿಯಲೇ ಸಣ್ಣ ಕಾಲ್ದಾರಿ ಇತ್ತು. ಆದ್ರೆ ಕೆಳಗೆ ಇಳಿಯಲ್ ಮಾತ್ರ ಸಿಕ್ಕಾಪಟ್ಟೆ ಕಷ್ಟ ಪಡವು . almost 70 digrees vertical ಆಗಿ ಇದ್ದು . ಮರದ ಬೇರು ಹಿಡ್ಕಂಡು ಇಳಿಯವು , ಆದಿ ಯಂತು ಸಿಕ್ಕಾಪಟ್ಟೆ ಸುಸ್ತಾಗಿ ಬಿಟ್ಟಿದ್ದ  . ಫಾಲ್ಸ್ ಮಾತ್ರ ಅದ್ಭುತ ಆಗಿದ್ದು ಇಷ್ಟೆಲ್ಲಾ ಕಷ್ಟ  ಪಟ್ಗ  ಬಂದ್ರು ಸಾರ್ಥಕ ಅನ್ನಿಸ್ತು .  ನನ್ಗವು ಇಷ್ಟೆಲ್ಲಾ ಸುತ್ತಾಡಿ ಬರದ್ರೊಳಗೆ ತಾಜ್   ಅಲ್ಲೇ ಒಬ್ಬ ಶಾಲಿಗೆ ಹೋಪ ಮಾಣಿ ಗುರ್ತು ಮಾಡ್ಕ್ಯ ಅವನ ಮನಿಗೆ ಹೋಗಿ ಆಸ್ರಿಗೆ ಕುಡ್ಕ , ತೋಟ ,ಗದ್ದೆ ಎಲ್ಲ ಓಡಾಡಿ ಬಂದಿತ್ತು !!!.. 



 ಮೂರನೇ ದಿನ ನಂಗ ಕರ್ನಾಟಕದ ಮೊದಲನೇ ರಾಜಧಾನಿ  ಬನವಾಸಿಗೆ ಹೊದ್ಯ , ಅಲ್ಲೊಂದು ಕೂಸು ಸೀರೆ ಉಟ್ಗ ಅದ್ರ ಮನೆ ಮುಂದೆ ನಿತ್ತಿತ್ತು , ಅದರದ್ ಒಂದು ಕ್ಲಿಕ್ ತಗಂಡ್ಯ , ಕದಂಬರು ಕಟ್ಟಿಸಿದ ಮಧುಕೇಶ್ವರ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿದ್ಯ , ಅಲ್ಲಿ ಒಂದು ಹಳೆ ಕಾಲದ್ದು ಬಸದಿ ಇದ್ದು ಹೇಳಿ ಯಾರೋ ಹೇಳಿದ್ದಿದ್ದ , ಅದ್ರ ಹುಡ್ಕ್ಯ ಹೊಂಟ್ರೆ ಕಡಿಗೆ ಸಿಕ್ಕಿದ್ದು ಅಷ್ಟೇನೂ ಹಳೆತಲ್ಲದ ಒಂದು ಬಸದಿ ಅದೂ ಬೀಗ ಹಾಕಿತ್ತು , ಬಂದ  ದಾರಿಗೆ ಸುಂಕ ಇಲ್ಲೇ ಹೇಳಿ  ವಾಪಸ್ ಸಿರ್ಸಿ ಗೆ ಬಂದು ಮಾರಿಕಾಂಬೆ ದರ್ಶನ ಮಾಡಿ ಅಲ್ಲೇ ಒಂದು ಹೋಟೆಲ್ ನಲ್ಲಿ ಊಟ ಮಾಡಿ ಹುಬ್ಬಳ್ಳಿ ಬಸ್ ಹತದ್ಯ ........ 

ಸೀರೆ ಉಟ್ಟ  ಪೋರಿ 

ಮಧುಕೇಶ್ವರ ದೇವಸ್ಥಾನ 


ಮಾರಿಗುಡಿ 
ಅಂತು  ನಂಗ್ಳ ಊರಿಗೆ  ಹೋಗಿ ಬಂದಾತು  ............ 

1 comment: